Add parallel Print Page Options

14 ಆಗ ದೇವರಾದ ಯೆಹೋವನು ಹಾವಿಗೆ,

“ನೀನು ಮಾಡಿದ ಈ ಕೆಟ್ಟಕಾರ್ಯದಿಂದ
    ನಿನಗೂ ಕೇಡುಗಳಾಗುತ್ತವೆ.[a]
ಬೇರೆಲ್ಲಾ ಪ್ರಾಣಿಗಳಿಗಿಂತಲೂ
    ನಿನಗೆ ಹೀನಸ್ಥಿತಿ ಉಂಟಾಗುವುದು.
ನೀನು ಹೊಟ್ಟೆಯಿಂದಲೇ ತೆವಳಿಕೊಂಡು
    ನಿನ್ನ ಜೀವಮಾನವೆಲ್ಲಾ ಮಣ್ಣನ್ನೇ ತಿನ್ನುವೆ.
15 ನೀನು ಮತ್ತು ಸ್ತ್ರೀಯು ಒಬ್ಬರಿಗೊಬ್ಬರು ವೈರಿಗಳಾಗಿರುವಂತೆ ಮಾಡುವೆನು.
    ನಿನ್ನ ಮಕ್ಕಳು ಮತ್ತು ಅವಳ ಮಕ್ಕಳು[b] ಒಬ್ಬರಿಗೊಬ್ಬರು ವೈರಿಗಳಾಗಿರುವರು.
ನೀನು ಆಕೆಯ ಮಗನ ಪಾದವನ್ನು ಕಚ್ಚುವೆ.
    ಆದರೆ ಅವನು ನಿನ್ನ ತಲೆಯನ್ನು ಜಜ್ಜಿ ಹಾಕುವನು” ಎಂದನು.

Read full chapter

Footnotes

  1. 3:14 ಕೇಡುಗಳಾಗುತ್ತವೆ ಅಕ್ಷರಶಃ, “ನೀನು ಶಾಪಗ್ರಸ್ತನಾಗಿರುವೆ.”
  2. 3:15 ಅವಳ ಮಕ್ಕಳು ಅಕ್ಷರಶಃ, ಹೀಬ್ರೂ ಭಾಷೆಯಲ್ಲಿ “ನಿನ್ನ ಬೀಜ ಮತ್ತು ಅವಳ ಬೀಜ.”